ಸ್ಯಾಂಡಲ್‌ವುಡ್‌ನಲ್ಲಿ ಪದೇ ಪದೆ ಟ್ರೋಲ್ ಆಗಿ ಸದ್ದು ಮಾಡುವವರು ಸೋನು ಶ್ರೀನಿವಾಸ್ ಗೌಡ. ಯಾವುದೇ ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳದೇ ತಾನಾಯ್ತು, ತನ್ನ ಕೆಲಸ ಆಯ್ತು ಎಂದು ಸೋನು ಬ್ಯುಸಿ ಇರ್ತಾರೆ. ಬಿಗ್‌ಬಾಸ್ ಓಟಿಟಿ ಶೋನಲ್ಲಿ ಕೂಡ ಭಾಗಿ ಆಗಿದ್ದರು. ಆ ಬಳಿಕ ಆಕೆಯ ಬಗ್ಗೆ ಕ್ರೇಜ್ ಹೆಚ್ಚಾಗಿತ್ತು. ಇನ್ನು ರೀಲ್ಸ್ ರಾಣಿ ಅಂತ್ಲೇ ಸೋನು ಫೇಮಸ್ ಆಗಿಬಿಟ್ಟಿದ್ದಾರೆ.
ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಲ್ಲಿ ಸೋನು ಶ್ರೀನಿವಾಸ್ ಗೌಡ ಕ್ರೇಜ್ ಜೋರಾಗಿದೆ. ಲಕ್ಷ ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಆಕೆಯ ಒಂದೊಂದು ಪೋಸ್ಟ್, ರೀಲ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಟ್ರೋಲ್ ಮಾಡುವವರು ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಸೋನು ತಮ್ಮನ್ನು ಟ್ರೋಲ್ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಗಂಭೀರ ಕಾರಣವೂ ಇದೆ.